ಅಭಿಪ್ರಾಯ / ಸಲಹೆಗಳು

ರಾಜೀವ್‌ ಗಾಂಧಿ ಸಂಸ್ಥೆಯ ಬಗ್ಗೆ

ಸಂಸ್ಥೆಯ ಬಗ್ಗೆ ಸಂಕ್ಷಿಪ್ತ ವರದಿ:

 

          ಎಸ್‌ಡಿಎಸ್‌ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆಯು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು ಸುಮಾರು 44 ಎಕರೆ ವಿಸ್ತೀರ್ಣದ ಜಾಗದಲ್ಲಿ 470 ಒಳರೋಗಿಗಳನ್ನೊಳಗೊಂಡಂತೆ ಎದೆರೋಗಗಳಿಗೆ ಸಂಬಂಧಿಸಿದ ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸೆಗಳ ಸೇವೆಯನ್ನು ನೀಡುತ್ತಿರುವ ಸೂಪರ್‌ ಸ್ಪೆಷಾಲಿಟಿ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಶ್ವಾಸಕೋಶ ಶಾಸ್ತ್ರ ಮತ್ತು ಕಾರ್ಡಿಯೋ ಥೋರಾಸಿಕ್‌ ಸರ್ಜರಿ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು ಸಂಸ್ಥೆಯು ತನ್ನದೇ ಆದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಹೊಂದಿರುವ ಒಂದು ಪ್ರತ್ಯೇಕ ಆಸ್ಪತ್ರೆಯಾಗಿದೆ.

 

ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯದಲ್ಲಿ ಔದ್ಯೋಗಿಕರಣ,ನಗರೀಕರಣ,ವಾಹನ ಮಾಲಿನ್ಯಗಳಿಂದ ಶ್ವಾಸಕೋಶದ ಖಾಯಿಲೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಗುತ್ತಿದೆ. ಇತ್ತೀಚಿಗೆ ಹೃದ್ರೋಗ ಮತ್ತು ಇತರೆ ಖಾಯಿಲೆಗಳಿಗೆ ಖಾಸಗಿ ವಲಯಗಳಲ್ಲಿ ಹೆಚ್ಚನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಶ್ವಾಸಕೋಶ ಮತ್ತು ಎದೆರೋಗಗಳ ಖಾಯಿಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಶ್ವಾಸಕೋಶ ಮತ್ತು ಎದೆರೋಗಗಳ ಖಾಯಿಲೆಗಳು ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಾಗಿ ಕಂಡು ಬರುವುದರಿಂದ ಹಾಗೂ ಇದಕ್ಕೆ ತಗಲುವ ವೆಚ್ಚ ಹೃದ್ರೋಗ ಖಾಯಿಲೆ ಆಗುವಷ್ಠೆ ಆಗುವುದರಿಂದ ಬಡ ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಈ ಸಂಸ್ಥೆಯು ಶ್ವಾಸಕೋಶ ಮತ್ತು ಎದೆರೋಗಗಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆ ನೀಡಲು ಇರುವ ಏಕೈಕ ರೆಫರಲ್‌ ಸಂಸ್ಥೆಯಾಗಿದ್ದು ಈ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯದಿಂದಲ್ಲದೆ ಬೇರೆ ರಾಜ್ಯಗಳಿಂದ ಸಹ ರೋಗಿಗಳು ಶ್ವಾಸಕೋಶ ಮತ್ತು ಥೋರಾಸಿಕ್‌ ಸರ್ಜರಿಗೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸಾ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

 

ಈ ಕಾರಣವನ್ನು ಪರಿಗಣಿಸಿದ ಸರ್ಕಾರವು ಈ ಸಂಸ್ಥೆಯನ್ನು ಹೆಚ್ಚನ ರೀತಿಯಲ್ಲಿ ಅಭಿವೃದ್ದಿಪಡಿಸಲು ಹಾಗೂ ಶ್ವಾಸಕೋಶ ಸಂಬಂಧಿಸಿದ ಖಾಯಿಲೆಗಳಿಗೆ ಉತ್ಕೃಷ್ಟ ಮಟ್ಟದ ಚಿಕಿತ್ಸೆಗಳನ್ನೊಳಗೊಂಡಂತೆ ಸಂಶೋಧನೆ ನಡೆಸಲು , ಸ್ನಾತಕೋತ್ತರ ಕೋರ್ಸುಗಳನ್ನು ಪ್ರಾರಂಭಿಸಲು ಮತ್ತು ಎಲ್ಲಾ ವೈದ್ಯರುಗಳಿಗೆ  ಶ್ವಾಸಕೋಶ ಖಾಯಿಲೆಗಳ ಚಿಕಿತ್ಸಾ ತರಬೇತಿ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ: ಆಕುಕ 70 ಎಂಎಸ್‌ಎಫ್ 2008 ದಿನಾಂಕ: 18.05.2009 ರಂದು ಈ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಪರಿವರ್ತಿಸಿ ಆದೇಶಿಸಿದೆ. ಈ ಸಂಸ್ಥೆಯನ್ನು ಎಸ್‌ ಡಿಎಸ್‌ ಕ್ಷಯರೋಗ ಸಂಶೋಧನಾ ಕೇಂದ್ರ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆಯೆಂದು ಕರ್ನಾಟಕ ಸಂಘಗಳ ನೊಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಾಯಿಸಲಾಗಿದೆ.

 

        ಬೆಂಗಳೂರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಚಿಕಿತ್ಸೆಯ ಕೇಂದ್ರಬಿಂದು ಆಗಿರುವುದರಿಂದ ಹಾಗೂ ರಾಷ್ಟ್ರದಲ್ಲಿ ಶ್ವಾಸಕೋಶದ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಂಸ್ಥೆಗಳು ಬೆರಳೆಣಿಕೆಯಷ್ಟು ಇರುವುದರಿಂದ ಈ ಸಂಸ್ಥೆಯನ್ನು ಅಭಿವೃದ್ದಿಪಡಿಸಿ ಶ್ವಾಸಕೋಶ ಖಾಯಿಲೆಗಳಿಗೆ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ರಾಜ್ಯದ ರೋಗಿಗಳಿಗೆ ಅಷ್ಠೇ ಅಲ್ಲದೇ ಇಡೀ ದೇಶದ ಮತ್ತು ಅಂತರ ರಾಷ್ರ್ಟೀಯ ಮಟ್ಟದಲ್ಲಿ ಸೂಪರ್‌ ಸ್ಪೆಷಾಲಿಟಿ ಸಂಸ್ಥೆಯನ್ನಾಗಿ ಅಭಿವೃದ್ದಿ ಪಡಿಸುವುದು ನಮ್ಮ ಧ್ಯೇಯವಾಗಿದೆ.

ಇತ್ತೀಚಿನ ನವೀಕರಣ​ : 27-01-2021 11:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಎಸ್‌ಡಿಎಸ್‌ ಟಿಆರ್‌ಸಿ ಮತ್ತು ರಾಜೀವ್‌ ಗಾಂಧಿ ಎದೆರೋಗಗಳ ಸಂಸ್ಥೆ ಬೆಂಗಳೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080